ಮಹಾಬಲ ಸೀತಾಳಭಾವಿಯವರು ಉತ್ತರಕನ್ನಡದ ಸಿದ್ಧಾಪುರದಲ್ಲಿ ೧೯೮೩ರಲ್ಲಿ ಜನಿಸಿದರು. ಇವರು ಯುವ ಪತ್ರಕರ್ತರಾಗಿ, ವಿದ್ವಾಂಸರಾಗಿ ಪ್ರಸಿದ್ದರು. = ಆರಂಭಿಕ ಜೀವನ = ಮಹಾಬಲ ಸೀತಾಳಭಾವಿಯವರ ತಂದೆಯ ಹೆಸರು ವಿಶ್ವೇಶ್ವರ ಭಟ್ ಸೀತಾಳಭಾವಿ. ಬಾಲ್ಯದಿಂದಲೂ ಅವರಿಗೆ ಸಿನಿಮಾ ಹಾಗೂ ಸಾಹಿತ್ಯ ವಿಚಾರಗಳಲ್ಲಿ ಆಸಕ್ತಿ ಇತ್ತು. ಇವರು ಸಂಸ್ಕೃತ ಹಾಗೂ ಆಂಗ್ಲ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. = ಶಿಕ್ಷಣ = ಮಹಾಬಲ ಸೀತಾಳಭಾವಿಯವರು ತಮ್ಮ ಉನ್ನತ ವಿದ್ಯಾಬ್ಯಾಸವನ್ನು ಮೈಸೂರಿನಲ್ಲಿ ಪಡೆದರು. ಅವರು ಸಂಸ್ಕ್ರತ ತರ್ಕಶಾಸ್ತ್ರ ವಿದ್ವತ್ ,ಮಾಧ್ಯಮ ಹಾಗು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದರು. = ವೃತ್ತಿ ಜೀವನ = ಉದಯ ಟಿವಿ, ಸುವರ್ಣ ನ್ಯೂಸ್ ವಾಹಿನಿಗಳಲ್ಲಿ ಹಾಗೂ ಉದಯವಾಣಿಯಲ್ಲಿ ದುಡಿದಿರುವ ಅವರು ಪ್ರಸ್ತುತ ಕನ್ನಡಪ್ರಭ ದೈನಿಕದ ಉಪ ಸುದ್ದಿ ಸಂಪಾದಕರಾಗಿದ್ಧಾರೆ. ಇವರ ಪತ್ನಿ ರೇಖಾ, ಮಗಳು ಸುಷೀಮಾ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. = ಆಸಕ್ತಿಯ ಕ್ಷೇತ್ರಗಳು = ಸಂಸ್ಕ್ರತ ಕನ್ನಡ ಆಂಗ್ಲ ಸಾಹಿತ್ಯ ವಿದೇಶಿ ಸಿನಿಮಾ ಪ್ರವಾಸ ಛಾಯಗ್ರಹಣ = ಮುಖ್ಯ ಕೃತಿಗಳು = ನಿತ್ಯಜೀವನಕ್ಕೆ ಹತ್ತಿರದ ಸುಭಾಷಿತಗಳು ನೂರೆಂಟು ಸುಭಾಷಿತಗಳು ಮ್ಯಾನೇಜ್ಮೆಂಟ್ ಭಗವದ್ಗೀತೆ ಚಾಣಕ್ಯನೀತಿ ಆಂಟನ್ ಚೆಕಾ‌ಫ್ ಕಥೆಗಳು ಲೋಕಪಾಲ: ಯಾಕಿಷ್ಟು ಗೊಂದಲ ನಾಯಕತ್ವದ ದಾರಿ ಪಂಚತಂತ್ರದ ಮಾದರಿ ಚಾಟು ಕವಿತೆಗೆ ಚುಟುಕು ಕತೆ ವಾರನ್ ಬಫೆಟ್ ವಂದನಾಶಿವ ಸುಂದರಲಾಲ ಬಹುಗುಣ ೧೦೮ ಹಳೆ ಆಚಾರ ಹೊಸ ವಿಚಾರ ಮ್ಯಾನೇಜ್ಮೆಂಟ್ ಕತೆಗಳು ಇಂಟರ್ನೆಟ್ ಕಥೆಗಳು = ಅನುವಾದಿಸಿದ ಕೃತಿಗಳು = ಪ್ರಿಯಂವದೆಯ ಸ್ವಗತ ಹಿಂದಿಗೆ ಅನುವಾದಗೊಂಡಿದೆ ಆಂಟನ್ ಚೆಕಾ‌ಫ್ ಕಥೆಗಳು ಭಾಸನ ಐದು ನಾಟಕಗಳು ಅಭಿಜ್ಞಾನ ಶಾಕುಂತಲ = ಪ್ರಶಸ್ತಿಗಳು = ಚೆನೈ ಅಂತರಾಷ್ಟ್ರೀಯ ಕಿರುಚಿತ್ರ ಮಂಡಳಿಯ ಪ್ರಶಂಸೆ ಮುಂಬೈ,ದೆಹಲಿ ಹಾಗೂ ಅಮೇರಿಕಾ ಕನ್ನಡ ಸಂಘದ ಪ್ರಶಸ್ತಿ ೨೦೦೫ರ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘದ ಪ್ರಶಸ್ತಿ (೨೦೦೫) ಛಾಯಗ್ರಹಣಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ = ಉಲ್ಲೇಖ =